ಬಹುಕೋಟಿ ವಂಚಕಿ ಐಶ್ವರ್ಯ ಗೌಡ ಕೇಸ್ ನಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಗೆ ಸಂಕಷ್ಟ ತಂದೊಡ್ಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿ ಕೆ ಸುರೇಶ್ ಇಡಿ ಮುಂದೆ ಹಾಜರಾಗುವ ಸಾಧ್ಯತೆಗಳಿವೆ. ಬೆಂಗಳೂರಿನ ಇಡಿ ಕಚೇರಿಗೆ ಮುಂಜಾನೆ 11 ಗಂಟೆಗೆ ಸುರೇಶ್ ಹಾಜರಾಗುವ ಸಾಧ್ಯತೆಗಳಿವೆ. ಐಶ್ವರ್ಯ ಕೇಸ್ ನಲ್ಲಿ ಡಿ ಕೆ ಸುರೇಶ್ ಗೆ ಜೂನ್ 19ರಂದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿರೋ ಹಿನ್ನೆಲೆಯಲ್ಲಿ ಸಮಯಾವಕಾಶ ಕೋರಿದ್ದ ಡಿ.ಕೆ. ಸುರೇಶ್ ಇವತ್ತು ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆಗಳಿವೆ. ವಂಚಕಿ ಐಶ್ವರ್ಯಾ ಡಿ.ಕೆ. ಸುರೇಶ್ ತಂಗಿ ಅಂತಾ ಹೇಳಿಕೊಂಡು ಹತ್ತಾರು ಜನಕ್ಕೆ ಕೋಟ್ಯಂತರ ರೂಪಾಯಿ ದೋಖಾ ಮಾಡಿದ್ದಾಳೆ.