ರಣರಂಗಕ್ಕೆ ಅಮೆರಿಕ ಪ್ರವೇಶಿಸುತ್ತಿದ್ದಂತೆ ಇರಾನ್ ಕೂಡ ತನ್ನ ಪ್ರಹಾರವನ್ನು ಆರಂಭಿಸಿದೆ. ಇಸ್ರೇಲ್ ಗೆ ಬೆನ್ನೆಲುಬಾಗಿ ಅಮೆರಿಕ ಯುದ್ಧ ಭೂಮಿಗಿಳಿದರೆ ದೊಡ್ಡ ಬೆಲೆತೆರಬೇಕಾದೀತು ಅಂತಾ ಖಮೇನಿ ವಾರ್ನಿಂಗ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಜಗತ್ತಿನ ಶೇಕಡ 20ರಷ್ಟು ತೈಲ ಸರಬರಾಜಾಗೋ ಜಲಸಂಧಿಯನ್ನೇ ಇರಾನ್ ಮುಚ್ಚಿದೆ.
ಹೌದು, ಅಮೆರಿಕ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ತೈಲ ಸರಬರಾಜಾಗುವ ರಹದಾರಿ ಅಂದ್ರೆ ಅದು ಹೋರ್ಮುಜ್ ಜಲಸಂಧಿ. ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಸಂಸತ್ ಒಪ್ಪಿಗೆ ಪಡೆದು ಈ ಮಾರ್ಗವನ್ನೇ ಬಂದ್ ಮಾಡಲಾಗಿದೆ. ಹಾಗೆ ನೋಡಿದರೆ, ಸುಮಾರು 1.8 ಕೋಟಿ ಬ್ಯಾರಲ್ ತೈಲ ಮತ್ತು ಇತರೆ ಇಂಧನ ಈ ಹೋರ್ಮುಜ್ ಜಲಸಂಧಿ ಮೂಲಕವೇ ಸಾಗುತ್ತೆ.
ಆದ್ರೀಗ ಇರಾನ್ ನ ಈ ನಿರ್ಧಾರ ಅಮೆರಿಕ ಸೇರಿ ಭಾರತದ ತೈಲ ಆಮದಿಗೂ ಪೆಟ್ಟು ನೀಡುತ್ತಿದೆ. ಭಾರತ ಶೇ. 90ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತೆ. ಅದರಲ್ಲೂ ಶೇ. 40ರಷ್ಟು ಈ ಜಲಸಂಧಿ ಮೂಲಕವೇ ಬರಬೇಕು. ಇರಾನ್ ನ ಈ ನಿರ್ಧಾರ ಭಾರತಕ್ಕೂ ದೊಡ್ಡ ಆಘಾತ ನೀಡುತ್ತಿದೆ.