ಧಾರವಾಡ: ಬಿಸಿ ಸಾಂಬಾರ್ (Sambar) ಮೇಲೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹುಬ್ಬಳ್ಳಿ (Hubballi) ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ಬಾಲಕಿ ಸಾವನ್ನಪ್ಪಿರುವ ದುರ್ದೈವಿ. ಎರಡೂವರೆ ವರ್ಷದ ರುಕ್ಸಾನಾ ಬಾನು ಶೇಖ್ ಸನದಿ ಸಾವನ್ನಪ್ಪಿರುವ ದುರ್ದೈವ ಬಾಲಕಿ ಎನ್ನಲಾಗಿದೆ. ಕಳೆದ ಐದು ದಿನಗಳ ಹಿಂದೆ ಮನೆಯವರೊಂದಿಗೆ ಮದುವೆಗೆಂದು ಹಾವೇರಿ (Haveri) ಜಿಲ್ಲೆಯ ಶಿಗ್ಗಾವಿ (Shiggaon) ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಹೋಗಿದ್ದ ಸಂದರ್ಭ ಬಾಲಕಿ ಮೈಮೇಲೆ ಬಿಸಿ ಸಾಂಬಾರ್ ಬಿದ್ದಿದೆ.
ಕೂಡಲೇ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.