ಹಾವೇರಿಯಲ್ಲಿ ಮೇರೆ ಮೀರಿದ ಪುಂಡರ ಆಟಾಟೋಪ. ಕುಡಿದ ಮತ್ತಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಅಡ್ಡಾದಿಡ್ಡಿ ಓಡಿಸಿದ ರೋಡ್ ರೋಮಿಯೋಗಳು ವಾಹನ ಸವಾರಲ್ಲಿ ಆತಂಕ ಮೂಡಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಸ್ವತ ಸ್ನೇಹಿತರೇ ಬಡಿದಾಡಿಕೊಂಡು ಹಾದಿ ರಂಪ ಬೀದಿ ರಂಪಾ ಸೃಷ್ಟಿಸಿದ್ದಾರೆ. ತಮ್ಮದೇ ಸ್ನೇಹಿತನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಗರದ ಬಸವೇಶ್ವರ ನಗರದಲ್ಲಿರುವ ಲಯನ್ಸ್ ಸ್ಕೂಲ್ ಮುಂಭಾಗ ಈ ಘಟನೆ ನಡೆದಿದ್ದು, ಶಹರ ಠಾಣೆ ಪೊಲೀಸರು ಇದೀಗ ಅಖಾಡಕ್ಕೆ ಇಳಿದಿದ್ದಾರೆ.