ಬೆಂಗಳೂರು : ಸಿಲಿಕಾನ್ ಸಿಟಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ನಡೆದಿದೆ.
ಇಂಗುಗುಂಡಿಯಲ್ಲಿ ನಾಲ್ಕೈದು ಪೀಸ್ ಅಸ್ಥಿಪಂಜರ ಪತ್ತೆಯಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ 2 ದಿನದ ಹಿಂದೆ ಪತ್ತೆಯಾಗಿದೆ. ಅಪಾರ್ಟ್ ಮೆಂಟ್ ಇಂಗುಗುಂಡಿ ಸ್ಚಚ್ಛ ಮಾಡುವಾಗ ಅಸ್ಥಿ ಪಂಜರಗಳು ಪತ್ತೆಯಾಗಿವೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಸ್ಥಿಪಂಜರ ಪೀಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆ ಪೀಸ್ ಗಳನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಅಸ್ಥಿಪಂಜರ ಮನುಷ್ಯರದ್ದಾ? ಪ್ರಾಣಿಯದ್ದಾ ಎಂದು ಪರಿಶೀನೆ ನಡೆಸಲಾಗಿದೆ. ಈ ಕುರಿತು ಯುಡಿಆರ್ ದಾಖಲಿಸಿ ಬೇಗೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.