ಎರಡು ತಲೆ ಇರುವ ಕರುವೊಂದು ಜನನವಾಗಿರುವ ವಿಸ್ಮಯಕಾರಿ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳ್ಳಿಯಲ್ಲಿ ಈ ಘಟನೆ ನಡೆದಿದೆ. ರೈತ ನೋಟದರ ನಾಗರಾಜ್ ಅವರ ಮನೆಯಲ್ಲಿ ಈ ಕರು ಜನಿಸಿದೆ. ಎರಡು ತಲೆ ಕರುವಿನ ಜನನದಿಂದ ಜನರು ಅಚ್ಚರಿಕೆ ಒಳಗಾಗಿದ್ದಾರೆ. ಇಂದು ಬೆಳಿಗ್ಗೆ ಎರಡು ತಲೆ ಕರುವಿಗೆ ಹಸು ಜನ್ಮ ನೀಡಿದೆ. ಎರಡು ತಲೆ, ನಾಲ್ಕು ಕಣ್ಣು ಇರುವ ಈ ಕರು ನೋಡಲು ಜನರು ಮುಗಿ ಬಿದ್ದಿದ್ದಾರೆ.