ಬೆಂಗಳೂರು: ನಾಲ್ಕನೇ ಬಾರಿಗೆ ಆರ್ ಸಿಬಿ ಫೈನಲ್ ಪ್ರವೇಶಿಸಿದೆ.
2025 ರ ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿದೆ.
ಈ ಮೂಲಕ ನಾಲ್ಕನೇ ಬಾರಿಗೆ ಫೈನಲ್ ತಲುಪಿದ ಸಾಧನೆಯನ್ನು ಆರ್ ಸಿಬಿ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಆರ್ಸಿಬಿ ಬೌಲರ್ಗಳ ಮಾರಕ ದಾಳಿಯ ಮುಂದೆ ಕೇವಲ 101 ರನ್ಗಳಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಆರ್ ಸಿಬಿ ತಂಡ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಪಂಜಾಬ್ ಹುಡುಗರು ಆರ್ ಸಿಬಿ ವಿರುದ್ಧ ಹೆಚ್ಚು ಹೊತ್ತು ಕ್ರೀಜ್ ನಲ್ಲಿ ನಿಲ್ಲದೆ ಸುಲಭವಾಗಿ ಶರಣಾದರು. ಪಂಜಾಬ್ ತಂಡವು ನಾಳೆ ನಡೆಯಲ್ಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವನ್ನು, ಕ್ವಾಲಿಫೈಯರ್ 2 ರಲ್ಲಿ ಎದುರಿಸಲಿದೆ.