ಬಾಗಲಕೋಟೆ: ಇತ್ತೀಚೆಗಷ್ಟೇ ಸೈನಿಕನಾಗಿ ಕರ್ತವ್ಯಕ್ಕೆ ಹಾಜರಾಗಿ ತರಬೇತಿ ಪಡೆಯುತ್ತಿದ್ದ ಯೋಧ ಹುತಾತ್ಮರಾಗಿರುವ ಘಟನೆ ನಡೆದಿದೆ.
ಛತ್ತೀಸ್ಗಢದಲ್ಲಿ (Chhattisgarh) ಹುತಾತ್ಮರಾಗಿದ್ದಾರೆ. ಯೋಧ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟಿ ತಾಂಡಾ ಗ್ರಾಮದ ಉಪೇಂದ್ರ ಸೋಮನಾಥ ರಾಥೋಡ್(24) ಕಳೆದ ಮೂರು ತಿಂಗಳ ಹಿಂದೆಯಷ್ಟೇ ಆಸ್ಸಾಂ ರೈಫಲ್ಸ್ (Assam Rifles) ಸೇರಿದ್ದರು. ಛತ್ತೀಸ್ ಗಢದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹುತಾತ್ಮ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನ ತಾಲೂಕಿಗೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.