ಗಡಿಯಲ್ಲಿ ನಿತ್ಯ ಅಪ್ರಚೋದಿತ ದಾಳಿ ನಡೆಸುತ್ತಲೇ ಇರುವ ಪಾಕ್ ಇದೀಗ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದೆ. ಮೊನ್ನೆಯಷ್ಟೇ ಖಂಡಾತರ ಕ್ಷಿಪಣಿ ದಾಳಿ ನಡೆಸಿದ್ದ ಪಾಕ್ ಇದೀಗ ಎರಡನೇ ಸುತ್ತಿನ ಪರೀಕ್ಷೆ ನಡೆಸಿದೆ.
120 ಕಿ.ಮೀಟರ್ ರೇಂಜಿನ ಖಂಡಾತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ ಅಂತಾ ಪಾಕ್ ಹೇಳಿಕೆ ರಿಲೀಸ್ ಮಾಡಿದೆ. ಭೂಮಿಯಿಂದ ಭೂಮಿಗೆ ನೆಗೆಯುವ ಈ ಫತಾಹ್ ಸರಣಿಯ ಕ್ಷಿಪಣಿಯನ್ನು ಪಾಕಿಸ್ತಾನ ಕರಾರುವಕ್ ಗುರಿಯನ್ನು ತಲುಪುವ ಮೂಲಕ ಯಶಸ್ಸನ್ನು ಕಂಡಿದೆ ಅಂತಾ ಎಆರ್ ವೈ ನ್ಯೂಸ್ ವರದಿ ಮಾಡಿದೆ. ಇದರ ನಡುವೆ ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿಯನ್ನು ಚೀನಾದ ರಾಯಬಾರಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಭಾರತ-ಪಾಕ್ ಗಡಿಯಲ್ಲಿ ಉಲ್ಬಣಿಸಿರುವ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಈ ಭೇಟಿ ಇದೀಗ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.