ಬೆಂಗಳೂರು: ದಿನೇದಿನೆ ಹೆಚ್ಚಾಗುತ್ತಿರುವ ಹಣದುಬ್ಬರ. ಶಿಕ್ಷಣ, ಆರೋಗ್ಯದ ವೆಚ್ಚಗಳಂತೂ ದುಪ್ಪಟ್ಟಾಗುತ್ತಿವೆ. ಇವೆಲ್ಲ ಬೆಲೆಯೇರಿಕೆಯನ್ನು ಮೀರಬೇಕು ಎಂದರೆ ನಾವು ದುಡಿಮೆಯ ಹಣವನ್ನು ಉಳಿಕೆ ಮಾಡುವ ಜತೆಗೆ ಹೂಡಿಕೆಯನ್ನೂ ಮಾಡಬೇಕು. ಅದರಲ್ಲೂ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಎಸ್ಐಪಿ ಹೂಡಿಕೆಯು ಸುಲಭದ ಮಾರ್ಗವಾಗಿದೆ. ಇನ್ನು, ಎಸ್ಐಪಿ ಮೂಲಕವೇ ಕೇವಲ 7 ವರ್ಷಗಳಲ್ಲಿ 27 ಲಕ್ಷ ರೂ. ಗಳಿಸುವುದು ಹೇಗೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
7 ವರ್ಷಗಳಲ್ಲಿ 27 ಲಕ್ಷ ರೂಪಾಯಿ ಗಳಿಸಬೇಕು ಎಂದರೆ, ನೀವು ಮಾಸಿಕ 20 ಸಾವಿರ ರೂ. ಹೂಡಿಕೆ ಮಾಡುತ್ತ ಹೋಗಬೇಕು. 7 ವರ್ಷಗಳ ಅವಧಿಯಲ್ಲಿ, ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳ ಎಸ್ಐಪಿ ಹೂಡಿಕೆಯೊಂದಿಗೆ ಒಟ್ಟು 16,80,000 ರೂಪಾಯಿಗಳನ್ನು ಹೂಡಿಕೆ ಮಾಡಿರುತ್ತೀರಿ. ಮಾಸಿಕ ರೂ. 20,000 ಎಸ್ಐಪಿ ಹೂಡಿಕೆಯೊಂದಿಗೆ, ನೀವು ಒಟ್ಟು ರೂ. 10,67,341 (ಸರಾಸರಿ) ಬಂಡವಾಳ ಲಾಭವನ್ನು ನಿರೀಕ್ಷಿಸಬಹುದು.
ಮಾಸಿಕ 20 ಸಾವಿರ ರೂಪಾಯಿಯ ಹೂಡಿಕೆಯ ಮೊತ್ತಕ್ಕೆ ಶೇ.13ರಷ್ಟು ಅಂದಾಜು ರಿಟರ್ನ್ಸ್ ಎಂದರೂ, 7 ವರ್ಷಗಳ ಅಂತ್ಯದ ವೇಳೆಗೆ, ಮೂಲ ಹೂಡಿಕೆ ಮತ್ತು ಬಂಡವಾಳ ಲಾಭವನ್ನು ಒಳಗೊಂಡಂತೆ, ನೀವು ನಿರೀಕ್ಷಿತ ಒಟ್ಟು ನಿಧಿ 27,47,341 ರೂಪಾಯಿ ಆಗಿರುತ್ತದೆ. ಇದರಿಂದಾಗಿ ಮಕ್ಕಳ ಉನ್ನತ ಶಿಕ್ಷಣ, ಮನೆ ಖರೀದಿ ಸೇರಿ ಹಲವು ಕನಸುಗಳನ್ನು ನನಸು ಮಾಡಿಕೊಳ್ಳಬಹುದಾಗಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಎಸ್ಐಪಿ ಕೂಡ ರಿಸ್ಕ್ ಹೊಂದಿರುತ್ತದೆ. ಷೇರು ಮಾರುಕಟ್ಟೆಯ ಏರಿಳಿತದ ಆಧಾರದ ಮೇಲೆ ರಿಟರ್ನ್ಸ್ ನಲ್ಲಿ ಹೆಚ್ಚು-ಕಡಿಮೆ ಆಗುತ್ತದೆ. ನಾವು ಇಲ್ಲಿ ನೀಡಿರುವ ಲೆಕ್ಕಾಚಾರವು ಕೇವಲ ಮಾಹಿತಿ ದೃಷ್ಟಿಯಿಂದಲೇ ಹೊರತು, ಶಿಫಾರಸು ಅಲ್ಲ. ಹಾಗಾಗಿ, ಹೂಡಿಕೆದಾರರು ಯಾವುದೇ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯುವುದು ಒಳ್ಳೆಯದು.