ಬೆಂಗಳೂರು: ಕರ್ನಾಟಕ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆಂಬ ಕಾರಣಕ್ಕೆ ಗಾಯಕ ಸೋನು ನಿಗಮ್ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ಅವರ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿದೆ. ಆದರೂ ಸೋನು ನಿಗಮ್ ಮಾತ್ರ ಮೊಂಡುವಾದ ಮಾಡಿದ್ದಾರೆ.
ಸೋನು ನಿಗಮ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಮತ್ತೆ ಮೊಂಡುವಾದದ ಉತ್ತರ ನೀಡಿದ್ದಾರೆ. ಕನ್ನಡ ಹಾಗೂ ತಮ್ಮ ಫಹಲ್ಗಾಮ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರ ಆಕ್ರೋಶದ ಮಧ್ಯೆಯೂ ಡೋಂಟ್ ಕೇರ್ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಹಿಂದಿ ಮೂಲದ ಗಾಯಕ ಕನ್ನಡಿಗರನ್ನೇ ದೂರಿದ್ದಾರೆ. ಕನ್ನಡ ಅಂತ ನನ್ನನ್ನು ಬೆದರಿಸಿದರು. ಅವರು ಬೆದರಿಸಿದ್ದಕ್ಕೆ ನಾನು ಆ ರೀತಿ ಹೇಳಿದೆ ಎಂದು ಸಮರ್ಥಿಸಿಕೊಂಡಿದ್ದರೆ.
ಕನ್ನಡಿಗರಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೋನು ನಿಗಮ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕನ್ನಡಿಗರ ಕ್ಷಮೆ ಕೇಳಿದ್ದರೆ, ಹೋರಾಟ ಮಾಡುವುದಾಗಿಯೇ ಕನ್ನಡಪರ ಸಂಘನೆಗಳು ಕರೆ ನೀಡಿವೆ.