ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ, ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಎಸ್ಐಆರ್- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ಜ್ಯೂನಿಯರ್್ ಸ್ಟೆನೊಗ್ರಾಫರ್ ಸೇರಿ ಒಟ್ಟು 16 ಹುದ್ದೆಗಳು ಖಾಲಿ ಇವೆ. ಇವುಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮೇ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಜ್ಯೂನಿಯರ್ ಸೆಕ್ರೆಟ್ರಿಯಟ್ ಅಸಿಸ್ಟಂಟ್ (Gen) – 04
ಜ್ಯೂನಿಯರ್ ಸೆಕ್ರೆಟ್ರಿಯಟ್ ಅಸಿಸ್ಟಂಟ್ (F&A) – 04
ಜ್ಯೂನಿಯರ್ ಸೆಕ್ರೆಟ್ರಿಯಟ್ ಅಸಿಸ್ಟಂಟ್ S&P) – 02
ಜ್ಯೂನಿಯರ್ ಸ್ಟೆನೊಗ್ರಾಫರ್- 06
ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಕೋರ್ಸ್ ಮುಗಿಸಿರಬೇಕು. ಜನರಲ್ ಹಾಗೂ ಒಬಿಸಿ ಕೆಟಗರಿಯವರಿಗೆ 500 ರೂ. ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ. 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು www.cftri.res.in. ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಹೊಂದಿದವರಿಗೆ ಮಾಸಿಕ 36,220 ರೂ.ನಿಂದ 47,415 ರೂ. ಮಾಸಿಕ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳ ಟೈಪಿಂಗ್, ಬರವಣಿಗೆ ಹಾಗೂ ಶಾರ್ಟ್ ಹ್ಯಾಂಡ್ ಪರೀಕ್ಷೆ ನಡೆಸಿ, ಅದರ ಮೌಲ್ಯಮಾಪನ ನಡೆಸಲಾಗುತ್ತದೆ. ಇದಾದ ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ.