ಶ್ರೀನಗರ: ಇಂದಿನಿಂದ ಅಮರನಾಥ ಯಾತ್ರೆಯ (Amaranath Yatra) ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
2025ರ ಅಮರನಾಥ ಯಾತ್ರೆ ಜೂ.29 ರಿಂದ ಪ್ರಾರಂಭವಾಗಿ ಆ.19 ರವೆರೆಗೆ ನಡೆಯಲಿದೆ. ಹೀಗಾಗಿ ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. 12,756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ತೆರಳುತ್ತಾರೆ. ಹೀಗಾಗಿ ಈ ವರ್ಷ ತೆರಳಲು ಕೂಡ ಭಕ್ತರು ಸಜ್ಜಾಗಿ ನಿಂತಿದ್ದಾರೆ.
ಅಮರನಾಥ ಯಾತ್ರೆಗೆ ನೋಂದಣಿ ಹೇಗೆ?
ಯಾತ್ರಿಕರು ಶ್ರೀ ಅಮರನಾಥ ದೇವಾಲಯ ಮಂಡಳಿಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಆನ್ಲೈನ್ ನೋಂದಣಿ ಹೇಗೆ?
1.https://jksasb.nic.in/ಗೆ ಭೇಟಿ ನೀಡಬೇಕು.
- 2025ರ ಯಾತ್ರಾ ನೋಂದಣಿ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಸಲ್ಲಿಸಬೇಕಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
–ಪಾಸ್ಪೋರ್ಟ್ ಗಾತ್ರದ ಫೋಟೋ
–ಏ.15ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ
– ಗುರುತಿನ ಚೀಟಿ ಸಲ್ಲಿಕೆ ಮಾಡಬೇಕು. - 220 ರೂ. ಪಾವತಿಸಬೇಕು.
ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಇದ್ದು, ಆನ್ ಲೈನ್ ನಲ್ಲಿ ಬುಕ್ ಮಾಡಬಹುದು. ಹೆಲಿಕಾಪ್ಟರ್ ಸೇವೆಗಾಗಿ ದರ ನಿಗದಿ ಮಾಡಲಾಗಿತ್ತು.