ನಾನು ಹಾಗೂ ಬ್ಯಾಂಕ್ ಜನಾರ್ದನ್ ಅಣ್ಣ ತಮ್ಮಂದಿರ ತರಹ ಇದ್ದೇವು ಎಂದು ಹಿರಿಯ ನಟ ಟೆನ್ನಿಸ್ ಕೃಷ್ಣ ತಿಳಿಸಿದ್ದಾರೆ. ಆಗಲಿದ ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರನ್ನು ನೆನೆದ ಟೆನ್ನಿಸ್ ಕೃಷ್ಣ, ನಾನು ಹಾಗೂ ಬ್ಯಾಂಕ್ ಜನಾರ್ದನ್ ಅಣ್ಣ ತಮ್ಮಂದಿರ ತರಹ ಇದ್ದೇವು.
ನಮ್ಮಲ್ಲಿ ಅಷ್ಟು ಆತ್ಮೀಯತೆ ಇತ್ತು. ಕಳೆದ 6 ತಿಂಗಳ ಹಿಂದೆ ಅವರನ್ನು ಭೇಟಿಯಾಗಿದ್ದೇ. ಆದಾದ ಬಳಿಕ ಇತ್ತೀಚಿಗೆ ಅವರು ಮನೆ ಬದಲಾವಣೆ ಮಾಡಿದ್ರು. ಅವರನ್ನು ನೋಡಲು ಬರುತ್ತೇನೆ ಎಂದಿದ್ದೇನೆ. ಆದ್ರೆ, ಅವರನ್ನು ನೋಡಲು ಸಾಧ್ಯವೇ ಆಗಲಿಲ್ಲ ಎಂದು ನೋವನ್ನು ಹೊರ ಹಾಕಿದ್ದಾರೆ.