ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಮುದ್ದು ಮಾತುಗಳಿಂದಲೇ ಜನರ ಮನಸ್ಸು ಗೆದ್ದ ಮಂಗಳೂರಿನ ಚೆಲುವೆ ಅನುಶ್ರೀ ಇದೀಗ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು! ಈ ವರ್ಷ ಆಂಕರ್ ಅನುಶ್ರೀ ಮದುವೆಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿರೂಪಕಿ ಅನುಶ್ರೀಗೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಖಾಸಗಿ ವಾಹಿನಿಯಲ್ಲಿ ಹಲವಾರು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡುತ್ತಿದ್ದು, ಕರ್ನಾಟಕದಲ್ಲಿ ನಂಬರ್ ಒನ್ ಆಂಕರ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅವರು, ಜನರಿಗೆ ಹತ್ತಿರವಾಗಲು ಯತ್ನಿಸುತ್ತಿರುತ್ತಾರೆ. ಈಗ ಲೈವ್ ವೊಂದರಲ್ಲಿ ವಿದ್ಯಾಪತಿ ಸಿನಿಮಾ ತಂಡದೊಂದಿಗೆ ಮಾತನಾಡಿದ್ದಾರೆ. ಈ ವೇಳೆ ನಟ ನಾಗಭೂಷಣ್, ನಟಿ ಮಲೈಕಾ ವಸುಪಾಲ್ ಜೊತೆ ಡಾಲಿ ಕೂಡ ಇದ್ದರು. ಆಗ ನಾಗಭೂಷಣ್ ಹಾಗೂ ನಟಿ ಮಲೈಕಾ ವಸುಪಾಲ್ ಅವರು ನಿಮ್ಮ ಮದುವೆ ಯಾವಾಗ ಅಂತ ನಟಿ ಅನುಶ್ರೀಗೆ ಪ್ರಶ್ನಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ತಾನು ಮದುವೆ ಆಗುವಬಹುದು ಎಂದು ನಗುತ್ತಾ ಮಾತನಾಡಿದ್ದಾರೆ. ಬಹಳ ವರ್ಷಗಳಿಂದ ನಟಿ ಅನುಶ್ರೀ ಅವರ ಮದುವೆಯ ಸುದ್ದಿ ಕೇಳಿ ಬರುತ್ತಿದೆ. ಪ್ರತಿ ಬಾರಿಯೂ ಹಾರಿಕೆ ಉತ್ತರ ನೀಡುತ್ತಲೇ ಬರುತ್ತಿದ್ದಾರೆ. ಆದರೆ, ಈ ಬಾರಿಯಾದರೂ ಅನುಶ್ರೀ ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.