ಬೆಂಗಳೂರು: ಮೊಟ್ಟ ಮೊದಲ ಕನ್ನಡ- ಇಂಗ್ಲಿಷ್ ನಿಘಂಟು ರಚನೆಕಾರ ಡಾ. ರೆವರೆಂಡ್ ಎಫ್. ಕಿಟೆಲ್ ಅವರ 193ನೇ ಹುಟ್ಟು ಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.
ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮೇಯೋಹಾಲ್ ಮುಂಭಾಗದ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಚಾಮರಾಜಪೇಟೆಯ ವಿಶ್ವಚೇತನ (ಕರ್ನಾಟಕ ನವ ನಿರ್ಮಾಣ ವೇದಿಕೆ) ಸಂಸ್ಥೆಯ ವತಿಯಿಂದ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ರೇಣುಕ ವೈಕುಂಠಯ್ಯ, ಪದಾಧಿಕಾರಿಗಳಾದ ಚಂದ್ರು ಗಂಗಪ್ಪ, ಮಂಗಳೂರಿನ ವೈದ್ಯ ರಿಚಿಕೇಶ್ ದ್ಯಾಮ್ಲೆ ಇದ್ದರು. ಈ ವೇಳೆ ಕಿಟೆಲ್ ಅವರ ಕನ್ನಡ ಪ್ರೇಮವನ್ನು ಗುಣಗಾನ ಮಾಡಲಾಯಿತು.