ಬೆಂಗಳೂರು: ಬೆಂಗಳೂರು ಟ್ರಾಫಿಕ್ ಪೊಲೀಸರು ವ್ಹೀಲಿಂಗ್ ಪುಂಡರ ವಿರುದ್ಧ ಸಮರ ಸಾರಿದ್ದಾರೆ.
ನಗರದಲ್ಲಿ ಇತ್ತೀಚೆಗೆ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪೊಲೀಸರು ಎಷ್ಟೇ ಕಠಿಣ ನಿಯಮ ಜಾರಿಗೆ ತಂದರೂ ಪುಂಡರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಕಳೆದ ಒಂದು ತಿಂಗಳಲ್ಲಿ ಬರೊಬ್ಬರಿ 398 ಪ್ರಕರಣ ದಾಖಲಾಗಿವೆ. ಈ ಪೈಕಿ 324 ಪುಂಡರನ್ನು ಬಂಧಿಸಲಾಗಿದ್ದು, 397 ಬೈಕ್ ಸೀಜ್ ಮಾಡಲಾಗಿದೆ. ಅಲ್ಲದೇ, 40 ಜನರ ಡಿಎಲ್ ಅಮಾನತು ಮಾಡಲಾಗಿದೆ. 197 ಆರ್.ಸಿ ರದ್ದು ಮಾಡಬೇಕೆಂದು ಪತ್ರ ಬರೆಯಲಾಗಿದೆ. ಅಪ್ರಾಪ್ತರ ಕೈಗೆ ಬೈಕ್ ಕೊಟ್ಟ 62 ಪೋಷಕರ ವಿರುದ್ಧ ಕೂಡ ಕೇಸ್ ದಾಖಲಾಗಿವೆ. 82 ಅಪ್ರಾಪ್ತರ ವಿರುದ್ಧ ಕೇಸ್, ಜುವೈನಲ್ ಆ್ಯಕ್ಟ್ ಅಡಿ 32 ಪ್ರಕರಣ ದಾಖಲು ಮಾಡಲಾಗಿದೆ.