ಬೆಂಗಳೂರು: ಮಹಿಳಾ ಸಬಲೀಕರಣ ಯೋಜನೆಯಡಿ ವಿಶೇಷ ಚೇತನ ಮಹಿಳೆಯರಿಗೆ ಆಟೋ ವಿತರಿಸಿದ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ(B. Dayananda) ಆಟೋದಲ್ಲಿ ಸಂಚಾರ ಮಾಡಿದ್ದಾರೆ.
ವಿಶೇಷ ಚೇತನ ಮಹಿಳೆಯರಿಗೆ ಎಲೆಕ್ಟ್ರಿಕಲ್ ಆಟೋ ವಿತರಿಸಿದ ನಗರ ಕಮಿಷನರ್ ದಯಾನಂದ ನಂತರ ಮಹಿಳೆಯರ ಆಟೋದಲ್ಲಿ ಸಂಚಾರ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಕಚೇರಿಯ ಕಮಾಂಡ್ ಸೆಂಟರ್ ಆವರಣದಲ್ಲಿ ಮಹಿಳೆಯರಿಗೆ ಈ ಆಟೋಗಳನ್ನು ವಿತರಿಸಲಾಯಿತು.
ವಿತರಣೆಯ ಬಳಿಕ ಮಹಿಳಾ ಚಾಲಕರ ಆಟೋದಲ್ಲಿ ಪ್ರಯಾಣ ನಡೆಸಿ, ಬೆಂಗಳೂರು ಸುತ್ತಿದ್ದಾರೆ. ನಂತರ ಶುಭಕೋರಿ ಪ್ರಾಮಾಣಿಕವಾಗಿ ದುಡಿದು ಬದುಕು ಕಟ್ಟಿಕೊಳ್ಳುವಂತೆ ಹಾರೈಸಿದ್ದಾರೆ.