ಸೆಲೆಬ್ರಿಟಿಗಳು ಏನೇ ಮಾಡಿದರೂ ದುಡ್ಡು…ದುಡ್ಡು! ಈಗ ಲಾಭದ ಗುಂಗು ಮದುವೆಗೂ ಎಂಟ್ರಿ ಕೊಟ್ಟಿದೆ. ಈ ಸೆಲೆಬ್ರಿಟಿ ಜೋಡಿ ಹಣಕ್ಕಾಗಿ ಮದುವೆಯನ್ನೇ ಮಾರಾಟಕ್ಕಿಟ್ಟಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುವಂತಾಗಿದೆ.
ನಟ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಜೋಡಿಯ ಬಗ್ಗೆ ಈಗ ಅಭಿಮಾನಿಗಳು ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಜೋಡಿ ತಮ್ಮ ಮದುವೆ ಪ್ರಸಾರ ಹಕ್ಕನ್ನು ನೆಟ್ ಫ್ಲಿಕ್ಸ್ ಗೆ 50 ಕೋಟಿ ರೂ. ಗೆ ಮಾರಾಟ ಮಾಡಿದೆ. ಹೀಗಾಗಿಯೇ ಈ ವಿಷಯ ದೊಡ್ಡ ಚರ್ಚಿತ ವಿಷಯವಾಗಿದೆ.
ಡಿ. 4ಕ್ಕೆ ಅಕ್ಕಿನೇನಿ ಕುಟುಂಬದ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ನಡೆಯಲಿದೆ. ಈಗಾಗಲೇ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ. ಆಪ್ತರು ಹಾಗೂ ಕುಟುಂಬಸ್ಥರಿಗೆ ಮಾತ್ರ ಮದುವೆಗೆ ಆಹ್ವಾನವಿದೆ. ಈ ಮಧ್ಯೆ ವಿವಾಹದ ಪ್ರಸಾರದ ಹಕ್ಕನ್ನು ನೆಟ್ಫ್ಲಿಕ್ಸ್ಗೆ ಈ ಜೋಡಿ ಮಾರಾಟ ಮಾಡಿದೆ ಎಂದು ತಿಳಿದು ಬಂದಿದೆ.
ಆದರೆ, ಈ ಕುರಿತು ನಾಗ ಚೈತನ್ಯ ಹಾಗೂ ಶೋಭಿತಾ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಇದು ನಿಜ ಆಗಿದ್ದರೆ ನೆಟ್ಫ್ಲಿಕ್ಸ್ ಕಡೆಯಿಂದಲೇ ಈ ವಿವಾಹದ ವಿಡಿಯೋಗಳು ಹೊರ ಬರಲಿವೆ. ಆಗ ಅಭಿಮಾನಿಗಳು ಹಣ ಕೊಟ್ಟು ಮದುವೆ ಸಮಾರಂಭ ನೋಡಬೇಕಾಗುತ್ತದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗುತ್ತಿದ್ದಂತೆ ಹಲವರು ಹಲವು ರೀತಿ ಕಮೆಂಟ್ ಮಾಡುತ್ತಿದ್ದಾರೆ.