ಬೆಂಗಳೂರು: ಕೇಂದ್ರ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) 69 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೈಂಟಿಸ್ಟ್ ಬಿ, ಅಸಿಸ್ಟಂಟ್ ಲಾ ಆಫೀಸರ್, ಸೀನಿಯರ್ ಟೆಕ್ನಿಕಲ್ ಸೂಪರ್ ವೈಸರ್ ಸೇರಿ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ದೇಶದ ಹಲವು ನಗರಗಳಲ್ಲಿ ಇರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು https://app1.iitd.ac.in/ ವಿಳಾಸಕ್ಕೆ ಭೇಟಿ ನೀಡಬೇಕು. ಸಿಪಿಸಿಬಿ ಆನ್ ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು ಅಥವಾ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಅಪ್ಲೋಡ್ ಮಾಡಬಹುದು. ಅರ್ಜಿ ಸಲ್ಲಿಕೆಗೆ ಏಪ್ರಿಲ್ 28 ಕೊನೆಯ ದಿನವಾಗಿದೆ.
ಯಾವ ಹುದ್ದೆಗಳಿಗೆ ಎಷ್ಟು ಸ್ಯಾಲರಿ
ಸೈಂಟಿಸ್ಟ್ ಬಿ: Rs. 56,100 – 1,77,500
ಅಸಿಸ್ಟಂಟ್ ಲಾ ಆಫೀಸರ್: Rs. 44,900 – 1,42,400
ಸೀನಿಯರ್ ಟೆಕ್ನಿಕಲ್ ಸೂಪರ್ ವೈಸರ್: Rs. 44,900 – 1,42,400
ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್: Rs. 35,400 – 1,12,400
ಟೆಕ್ನಿಕಲ್ ಸೂಪರ್ ವೈಸರ್: Rs. 35,400 – 1,12,400
ಅಸಿಸ್ಟಂಟ್: Rs. 35,400 – 1,12,400
ಅಕೌಂಟ್ಸ್ ಅಸಿಸ್ಟಂಟ್: Rs. 35,400 – 1,12,400
ಜ್ಯೂನಿಯರ್ ಟ್ರಾನ್ಸ್ ಲೇಟರ್: Rs. 35,400 – 1,12,400
ಸೀನಿಯರ್ ಡ್ರೌಟ್ಸ್ ಮನ್: Rs. 35,400 – 1,12,400
ಜ್ಯೂನಿಯರ್ ಟೆಕ್ನಿಶಿಯನ್: Rs. 25,500 – 81,100
ಸೀನಿಯರ್ ಲ್ಯಾಬೊರೇಟರಿ ಅಸಿಸ್ಟಂಟ್: Rs. 25,500 – 81,100
ಅಪ್ಪರ್ ಡಿವಿಷನ್ ಕ್ಲರ್ಕ್: Rs. 25,500 – 81,100
ಡೇಟಾ ಎಂಟ್ರಿ ಆಪರೇಟರ್ ಗ್ರೇಡ್-II: Rs. 25,500 – 81,100
ಸ್ಟೆನೋಗ್ರಾಫರ್ ಗ್ರೇಡ್-II: Rs. 25,500 – 81,100
ಜ್ಯೂನಿಯರ್ ಲ್ಯಾಬೊರೇಟರಿ ಅಸಿಸ್ಟಂಟ್: Rs. 19,900 – 63,200
ಲೋವರ್ ಡಿವಿಷನ್ ಕ್ಲರ್ಕ್: Rs. 19,900 – 63,200
ಫೀಲ್ಡ್ ಅಟೆಂಡಂಟ್: Rs. 18,000 – 56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್): Rs. 18,000 – 56,900
ನೇಮಕಾತಿ ಹೇಗೆ?
ಪರೀಕ್ಷೆ, ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನ್ವಯ 1.77 ಲಕ್ಷ ರೂಪಾಯಿ ಮಾಸಿಕ ವೇತನ ನೀಡಲಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ಸಡಿಲಿಕೆ ಇದೆ.