ವಿಜಯಪುರ: ಬ್ಯಾಂಕ್ ಮ್ಯಾನೇಜರ್ ನ ಸ್ಕೆಚ್ ನಂತೆ 10.5 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ್ದ ಮೂವರನ್ನು ಪೊಲೀಸರು ಹೆಡೆಮೂರಿ ಕಟ್ಟಿದ್ದಾರೆ.
ಈ ಘಟನೆ ಮೇ 25ರಂದು ನಡೆದಿತ್ತು. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದ ಕೆನರಾ ಬ್ಯಾಂಕ್ ನಲ್ಲಿ ನಡೆದಿತ್ತು. ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ನೇ ಇಲ್ಲಿ ಖದೀಮನಾಗಿದ್ದಾನೆ. ಖದೀಮರು 58 ಕೆ.ಜಿ 975.94 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಕುಮಾರ್ (41), ಚಂದ್ರಶೇಖರ್ (38), ಸುನೀಲ್ (40) ಬಂಧಿತ ಆರೋಪಿಗಳು. ಆರೋಪಿತ ವಿಜಯಕುಮಾರ್ ಹುಬ್ಬಳ್ಳಿಯ ಕೋಠಾರಿ ನಗರದ ಕೆನರಾ ಬ್ಯಾಂಕ್ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಚಂದ್ರಶೇಖರ ಹುಬ್ಬಳ್ಳಿಯಲ್ಲಿ ಖಾಸಗಿ ಉದ್ಯೋಗಿಯಾಗಿದ್ದ. ಆರೋಪಿ ಸುನೀಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.