ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ 33 ವಿವಿಧ ಆಡಳಿತಾತ್ಮಕ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ (FSSAI Recruitment 2025) ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
ನಿರ್ದೇಶಕರು – 2
ಜಂಟಿ ನಿರ್ದೇಶಕರು – 3
ಹಿರಿಯ ವ್ಯವಸ್ಥಾಪಕರು – 2
ಮ್ಯಾನೇಜರ್ – 4
ಸಹಾಯಕ ನಿರ್ದೇಶಕರು – 1
ಆಡಳಿತ ಅಧಿಕಾರಿ – 10
ಸೀನಿಯರ್ ಖಾಸಗಿ ಕಾರ್ಯದರ್ಶಿ – 4
ಸಹಾಯಕ ವ್ಯವಸ್ಥಾಪಕ – 1
ಸಹಾಯಕ – 6
ಅರ್ಜಿ ಸಲ್ಲಿಕೆಗೆ ಹೇಗೆ?
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು fssai.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ಮೂಲಕ ಸಲ್ಲಿಸುವವರು, ಅರ್ಜಿ ನಮೂನೆಯ ಮುದ್ರಿತ ಪ್ರತಿಯನ್ನು ಎಲ್ಲ ಸಂಬಂಧಿತ ದಾಖಲೆಗಳು ಮತ್ತು ಪ್ರಮಾಣಪತ್ರಗಳೊಂದಿಗೆ ಸಹಾಯಕ ನಿರ್ದೇಶಕರು, ನೇಮಕಾತಿ ಕೋಶ, ಎಫ್ಎಸ್ಎಸ್ಎಐ ಕೇಂದ್ರ ಕಚೇರಿ, 312, 3 ನೇ ಮಹಡಿ, ಎಫ್ ಡಿ ಎ ಭವನ, ಕೋಟ್ಲಾ ರಸ್ತೆ, ನವದೆಹಲಿ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ನಿರ್ದೇಶಕರಂತಹ ಹುದ್ದೆಗಳಿಗೆ ವಿಶ್ವವಿದ್ಯಾಲಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಆಡಳಿತ, ಹಣಕಾಸು, ಮಾನವ ಸಂಪನ್ಮೂಲ ಅಥವಾ ವಿಜಿಲೆನ್ಸ್ ಇಲಾಖೆಯಲ್ಲಿ ಕನಿಷ್ಠ 15 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಸಹಾಯಕ ಹುದ್ದೆಗೆ 10 ವರ್ಷದ ಅನುಭವ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 1,23,100 ರಿಂದ 2,15,900 ರೂ.ವರೆಗೆ ವೇತನ ನೀಡಲಾಗುತ್ತದೆ.