ಬೆಂಗಳೂರು: ಕರ್ನಾಟಕದ ಆಯುಷ್ ಇಲಾಖೆಯಲ್ಲಿ 27 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರೊಫೆಸರ್ ವಿಭಾಗದಲ್ಲಿ 9, ಅಸೋಸಿಯೇಷ್ ಪ್ರೊಫೆಸರ್ 7 ಹಾಗೂ ಅಸಿಸ್ಟಂಟ್ ಪ್ರೊಫೆಸರ್ 11 ಹುದ್ದೆಗಳು ಖಾಲಿ ಇವೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ 17 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ayush.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಲಿಸ್ಟ್ ಬಿಡುಗಡೆ ಬಳಿಕ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ. 2ಎ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ ಇದೆ. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷದ ಸಡಿಲಿಕೆ ಇದೆ.
ಸಂಸ್ಥೆಯ ಹೆಸರು : ಆಯುಷ್ ಇಲಾಖೆ ಕರ್ನಾಟಕ
ಹುದ್ದೆಗಳ ಸಂಖ್ಯೆ: 27
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಪ್ರಾಧ್ಯಾಪಕ , ಸಹಾಯಕ ಪ್ರಾಧ್ಯಾಪಕ
ಸಂಬಳ: ತಿಂಗಳಿಗೆ 40-45 ಸಾವಿರ ರೂ.
ಶೈಕ್ಷಣಿಕ ಅರ್ಹತೆ ಏನು?
ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , ಬಿಎಎಂಎಸ್, ಬಿಯುಎಂಎಸ್, ಸ್ನಾತಕೋತ್ತರ ಪದವಿ ಪಡೆದಿರಬೇಕು.
ಹೀಗೆ ಅರ್ಜಿ ಸಲ್ಲಿಸಿ
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಆಯುಕ್ತರು/ಅಧ್ಯಕ್ಷರು, ಸಮಾಲೋಚಕ ಶಿಕ್ಷಕರ ಆಯ್ಕೆ ಸಮಿತಿ, ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು-560009 ವಿಳಾಸಕ್ಕೆ ಕಳುಹಿಸಬೇಕು.