ಬೆಂಗಳೂರು: ದೇಶದ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಇತ್ತೀಚೆಗೆ ಗ್ರಾಹಕರನ್ನು ಸೆಳೆಯಲು ಹಲವು ಆಫರ್ ನೀಡುತ್ತಿದೆ. ಉಚಿತ ಕರೆ, ಇಂಟರ್ನೆಟ್ ಸೇರಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈಗ ಬಿಎಸ್ಎನ್ಎಲ್ ಕಂಪನಿಯು ವಿಶೇಷ ರಿಚಾರ್ಜ್ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಿದೆ.
ಬಿಎಸ್ಎನ್ಎಲ್ ಗ್ರಾಹಕರು 345 ರೂಪಾಯಿ ರೀಚಾರ್ಜ್ ಮಾಡಿಸಿದರೆ 60 ದಿನ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು ಅನಿಯಮಿತ ಉಚಿತ ಕರೆಯ ಪ್ರಯೋಜನ ಪಡೆಯುತ್ತೀರಿ. ಇದರ ಜೊತೆಗೆ, ನೀವು ಪ್ರತಿದಿನ 1ಜಿಬಿ ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ ಪ್ರಯೋಜನವನ್ನು ಕೂಡ ಪಡೆಯುತ್ತೀರಿ.
ಮತ್ತೊಂದೆಡೆ ಗ್ರಾಹಕರು 347 ರೂಪಾಯಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ನಿಮಗೆ 56 ದಿನಗಳ ಮಾನ್ಯತೆ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಅನಿಯಮಿತ ಉಚಿತ ಕರೆಯ ಪ್ರಯೋಜನವನ್ನು ಪಡೆಯುತ್ತೀರಿ. ಇದರೊಂದಿಗೆ, ನೀವು ಪ್ರತಿದಿನ 2ಜಿಬಿ ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ ಕಳುಹಿಸುವ ಪ್ರಯೋಜನವನ್ನು ಕೂಡ ಪಡೆಯುತ್ತೀರಿ.
ಬಿಎಸ್ಎನ್ಎಲ್ನ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳಿಂದಾಗಿ ಬಳಕೆದಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಅನೇಕ ಜನರು ತಮ್ಮ ಸಂಖ್ಯೆಗಳನ್ನು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡುತ್ತಿದ್ದಾರೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ದೇಶಾದ್ಯಂತ 5 ಜಿ ಇಂಟರ್ನೆಟ್ ಸೇವೆ ಒದಗಿಸುವುದು ಬಿಎಸ್ಎನ್ಎಲ್ ಗುರಿಯಾಗಿದೆ.