ಬೆಂಗಳೂರು : ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಟಿಕೆಟ್ ದರವನ್ನು ಶೇ. 15ರಷ್ಟು ಏರಿಕೆ ಮಾಡಿದೆ. ಇದರ ಮಧ್ಯೆ ಹಾಲು, ನೀರು, ಕರೆಂಟ್ ದರ ಕೂಡ ಏರಿಕೆ ಮಾಡಿದೆ. ಈಗ ಮತ್ತೊಮ್ಮೆ ಮದ್ಯದ ದರಕ್ಕೂ ಸರ್ಕಾರ ಕೈ ಹಾಕಿದೆ.
ವರ್ಷದ ಆರಂಭದಲ್ಲೇ ಮಧ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಬಜೆಟ್ ಗೆ ಮುನ್ನವೇ ಮಧ್ಯದ ದರ ಏರಿಕೆ ಮಾಡಲಾಗುತ್ತಿದ್ದು, 10 ರೂ.ನಿಂದ 15 ರೂ. ವರೆಗೆ ಮದ್ಯದ ದರ ಏರಿಕೆಯಾಗಿದೆ. ಜ. 20ರಿಂದಲೇ ನೂತನ ದರ ಜಾರಿಗೆ ಬರಲಿದೆ.
ಸರ್ಕಾರಕ್ಕೆ ಅಬಕಾರಿ ಇಲಾಖೆಯೇ ಆಧಾರ. ಗ್ಯಾರಂಟಿಯಿಂದಾಗಿ ಹೈರಾಣಾಗಿರುವ ಕಾಂಗ್ರೆಸ್ ಗೆ ಈಗ ಅಬಕಾರಿ ಇಲಾಖೆಯೇ ಆಸರೆ. ಈ ಹಿನ್ನೆಲೆಯಲ್ಲಿ ಮದ್ಯದ ದರವನ್ನು ಸರ್ಕಾರ ಏರಿಸುತ್ತಲೇ ಬರುತ್ತಿದೆ. ಈಗ ಮತ್ತೊಮ್ಮೆ ನಿರೀಕ್ಷಿತ ಆದಾಯ ಸಿಗದ ಹಿನ್ನೆಲೆಯಲ್ಲಿ ಮದ್ಯದ ದರ ಏರಿಕೆಗೆ ಕೈ ಹಾಕಿದೆ.
ಸಾಮಾನ್ಯ ಜನರು ಸೇವಿಸುವ ಬಿಯರ್ ದರ ಏರಿಕೆ ಮಾಡಲಾಗಿದೆ. ಬುಲೆಟ್ ಬಿಯರ್ ಬೆಲೆ ಸದ್ಯ 98 ರೂ. ಇದ್ದರೆ, ಹೊಸ ದರ -145ಗೆ ಏರಿಕೆಯಾಗಿದೆ. Kf 650 – ಹೊಸ ದರ 190 ಆದರೆ, ಹಳೆದರ 175 ರೂ. ಇದೆ. Kfs 650 – ಹೊಸ ದರ 195 ಹಳೆದರ 180 ರೂ. ಇದೆ. London pilsner – ಹೊಸದರ 155, ಹಳೆದರ 135, Ultra 650 – ಹೊಸದರ 225 ರೂ., ಹಳೆ ದರ 208 ರೂ, Ultra Max – ಹೊಸದರ 240 ರೂ., ಹಳೆ ದರ 220 ರೂ, Heineken Silver – ಹೊಸದರ 265 ರೂ. ಹಳೆದರ 250 ರೂ. ಇದೆ. ಸರ್ಕಾರ ದರ ಏರಿಸುತ್ತಿರುವುದಕ್ಕೆ ಮದ್ಯ ಪ್ರಿಯರು ಕಿಡಿಕಾರುವಂತಾಗಿದೆ.