ಬೆಂಗಳೂರು: ಸತ್ಲೆಜ್ ಜಲ ವಿದ್ಯುತ್ ನಿಗಮದಲ್ಲಿ (SJVN) 114 ಎಕ್ಸಿಕ್ಯೂಟಿವ್ ಟ್ರೇನಿ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ದೇಶದ ಹಲವು ಭಾಗಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಮೇ 18ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ ಸೈಟ್ ಆಗಿರುವ sjvnindia.com ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಸಿವಿಲ್- 30
ಎಲೆಕ್ಟ್ರಿಕಲ್- 15
ಮೆಕ್ಯಾನಿಕಲ್- 15
ಮಾನವ ಸಂಪನ್ಮೂಲ- 07
ಪರಿಸರ- 07
ಭೂವಿಜ್ಞಾನ – 07
ಐಟಿ- 06
ಫೈನಾನ್ಸ್ – 20
ಕಾನೂನು- 07
ಸತ್ಲೆಜ್ ಜಲ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಬಿ.ಟೆಕ್/ಬಿ.ಇ, ಎಂಎಸ್ಸಿ, ಎಂ.ಇ/ಎಂಟೆಕ್, ಎಂಬಿಎ/ಪಿಜಿಡಿಎಂ, ಪಿಜಿ ಡಪ್ಲೋಮಾದಲ್ಲಿ ಯಾವುದಾದರೂ ಒಂದು ಕೋರ್ಸ್ ಮುಗಿಸಿರಬೇಕು. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 30 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ ಐದು ವರ್ಷ ಹಾಗೂ ಒಬಿಸಿ, ಜನರಲ್ ಕೆಟಗರಿಯವರಿಗೆ 3 ವರ್ಷದ ಸಡಿಲಿಕೆ ಇದೆ.
ಎಸ್ಸಿ, ಎಸ್ಟಿ, ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ. ಉಳಿದ ವರ್ಗಗಳ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕವಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 50 ಸಾವಿರ ರೂಪಾಯಿಯಿಂದ 1.6 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಹಾಗೆಯೇ, DA, HRA, ಇತ್ಯಾದಿ ಸೌಲಭ್ಯಗಳು ಲಭ್ಯವಿರುತ್ತವೆ.